ಮಂಡ್ಯ : ಮಂಡ್ಯದ ಗಂಡು, ರೆಬಲ್ ಸ್ಟಾರ್, ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್ ಶನಿವಾರ ರಾತ್ರಿ ನಿಧನ ಹೊಂದಿದರು.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕಿಡ್ನಿ ಬದಲಾವಣೆಗೆ ದಿನಾಂಕ ನಿಗದಿ ಕೂಡ ಆಗಿತ್ತು. ಆದರೆ, ಮಗನ ಹುಟ್ಟು ಹಬ್ಬದ ದಿನ ಮುಗಿದ ಬಳಿಕ ಮಾಡಿಸಿಕೊಂಡರಾಯಿತು ಎಂದು ಅವರು ಮುಂದೂಡಿದ್ದರು.
ಈಗಾಗಲೇ ಆಸ್ಪತ್ರೆಗೆ ದಾವಿಸಿರುವ ನಟ ಪುನೀತ್ ರಾಜಕುಮಾರ, ಯಶ್ ಇನ್ನಿತರ ನಟರು, ಸಚಿವ ಡಿಕೆ ಶಿವಕುಮಾರ್ ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ.
ಮಂಡ್ಯದಿಂದ ಸಂಸದರಾಗಿದ್ದ, ಶಾಸಕರಾಗಿದ್ದ ಅವರು ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿದ್ದರು.
ಎಲ್ಲ ಚಿತ್ರರಂಗದಲ್ಲಿ ಸ್ನೇಹಿತರನ್ಬು ಹೊಂದಿದ್ದರು. ರಾಜಕೀಯವಾಗಿ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿದ್ದ ಅವರು ಸಿದ್ದ ರಾಮಯ್ಯ ಸರಕಾರದಿಂದ ಮಂತ್ರಿಸ್ಥಾನದಿಂದ ಕೆಳಗಿಳಿಸಿದ ಸಂದರ್ಭದಲ್ಲಿ ಮುನಿಸಿಕೊಂಡ ಅವರು ಜೆಡಿ ಎಸ್ ಜೊತೆಗೆ ಗುರುತಿಸಿಕೊಂಡಿದ್ದರು.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ವಿಕ್ರಮ
ಆಸ್ಪತ್ರೆಗೆ ಸೇರಿಸಲಾಗಿತ್ತು.
ಅವರಿಗೆ ೬೬ ವರ್ಷ ವಯಸ್ಸಾಗಿತ್ತು . ೧೯೫೨ರ ಮೇ ದೊಡ್ಡರಸಿನಕೆರೆ ಗ್ರಾಮದಲ್ಲಿ ಪದ್ಮಮ್ಮ ಹಾಗೂ ಹುಚ್ಚೇಗೌಡರ ಆರನೇ ಪುತ್ರರಾಗಿದ್ದ ಅವರು ಪೀಟಿಲು ಚೌಡಯ್ಯ ಅವರ ಮೊಮ್ಮಗ ನಾಗಿದ್ದರು.
ಸಿಎಂ ಕುಮಾರಸ್ವಾಮಿ ಕೂಡ ಆಸ್ಪತ್ರೆಗೆ ಧಾವಿಸಿ ಮಾಹಿತಿ ಪಡೆಯುತ್ತಿದ್ದಾರೆ.