ಧಾರವಾಡ prajakiran.com : ಜೆಡಿಎಸ್ ಮುಖಂಡ ದೇವರಾಜ ಕಂಬಳಿ ಅವರು ಏ. 10ರಂದು ಕಾಗಿನೆಲೆ ಕನಕ ಗುರು ಪೀಠ ಶ್ರೀ ರೇವಣಸಿದ್ದೇಶ್ವರ ಸಿಂಹಾಸನದ ಪೀಠದ ಜಗದ್ಗುರುಗಳಾದ ಶ್ರೀ ನಿರಂಜನಾನಂದ ಮಹಾ ಸ್ವಾಮೀಜಿಗಳ ಹುಟ್ಟುಹಬ್ಬದ ಆಚರಣೆಯನ್ನು ಕರೊನ್ ಮಹಾಮಾರಿ ಯ ವಿರುದ್ದ ಹೋರಾಟ ನಡೆಸುತ್ತಿರುವ ಪೌರ ಕಾರ್ಮಿಕರಿಗೆ ದಿನಸಿ ವಸ್ತುಗಳ ವಿತರಣೆ ಮಾಡುವುದರ ಮೂಲಕ ಆಚರಿಸಿದರು.
ಧಾರವಾಡದ 200ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ 5 ಕೆ.ಜಿ. ಅಕ್ಕಿ, 2 ಕೆ.ಜಿ.ಸಕ್ಕರಿ, 1 ಕೆ.ಜಿ. ತೊಗರೆಬೆಳೆ, 1 ಲೀ. ಎಣ್ಣೆ ಯನ್ನು ನೀಡಿದರು.
ಅಲ್ಲದೆ ಕುರಿಗಳನ್ನು ಕಾಯುವ ಕುರಿಗಾಹಿ ಜನರಿಗೆ 5 ಕೆ.ಜಿ.ಜೋಳ, 5ಕೆ.ಜಿ. ಅಕ್ಕಿ, 1ಕೆ.ಜಿ. ಬೆಲ್ಲ ವನ್ನು ನವಲಗುಂದದ ವರೆಗೆ ಹೋಗಿ ತಮ್ಮ ಅಳಿಲು ಸೇವೆಯನ್ನು ನೀಡಿದರು.
ದೇವರಾಜ ಕಂಬಳಿ ಮಾತನಾಡಿ, ಮಳೆಗಾಳಿಯೆಂದು ಲೆಕ್ಕಿಸದೆ ಪೌರ ಕಾರ್ಮಿಕರು ಹಾಗೂ ಕುರಿಗಾಯಿಗಳು ತಮ್ಮ ಜೀವನವನ್ನೇ ಮೊಡಿಪಾಗಿಟ್ಟ ಜನರು ಬಹಳ ಜನವಿದ್ದಾರೆ.
ಆದರೆ ಅವರ ಹೊಟ್ಟೆಪಾಡಿಗೆ ಅವರು ಸಾಕಿದ ಕುರಿಗಳನ್ನು ಹೊರಗಡೆ ಮೇಯಿಸಿಕೊಂಡು ಬಂದಾಗ ಮಾತ್ರ ಅವರ ಹೊಟ್ಟೆಪಾಡು ನಡೆಯುತ್ತದೆ. ಅದಕ್ಕಾಗಿ ಅಂತಹ ಕುರಿಗಾಹಿ ಜನರಿಗೂ ಸಹ ನನ್ನ ಕೈಲಾದಷ್ಟು ಮಟ್ಟಿಗೆ ದಿನಸಿ ಮಸ್ತುಗಳನ್ನು ವಿತರಿಸಿದ್ದೇನೆ ಎಂದರು.