ಮಂಗಳೂರು : ಅಯ್ಯಪ್ಪ ಸ್ವಾಮಿ ದೇವರಲ್ಲ ಎಂದ ಪ್ರಕಾಶ ರೈ ವಿರುದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಕಿಡಿ ಕಾರಿದ್ದಾರೆ.
ಅವರು ಗೌರಿ ಲಂಕೇಶ್ ಹತ್ಯೆಯಿಂದ ಇನ್ನೂ ಹೊರ ಬಂದಿಲ್ಲ ಅಂತ ಕಾಣುತ್ತದೆ. ಅವರ ಹತ್ಯೆ ಬಗ್ಗೆ ನಮಗೂ ಬೇಸರವಿದೆ. ಆದರೆ ಅವರು ನಮ್ಮ ಹಿಂದೂ ಧರ್ಮವನ್ನು ಪದೆ ಪದೇ ಹಿಯಾಳಿಸುತ್ತಿದ್ದರು. ಹಿಂದು ಧರ್ಮ ಧರ್ಮವೇ ಅಲ್ಲ. ಹಿಂದು ದೇವರು ದೇವರಲ್ಲ ಎಂದು ಹೇಳುತ್ತಿದ್ದರು.
ಅದೇ ಮನಸ್ಥಿತಿಯನ್ನು ಈ ನಟ ಪ್ರಕಾಶ್ ರೈ ಹೊಂದಿದ್ದಾರೆ. ಅವರಿಗೆ ಆ ದೇವರೆ ಸರಿಯಾದ ಬುದ್ದಿಯನ್ನು ಕಲಿಸ್ತಾನೆ ಎಂದು ಗುಡುಗಿದರು.
ಅಂದ ಹಾಗೆ ನಟ ಪ್ರಕಾಶ ರೈ ಮಹಿಳೆಯರಿಗೆ ದರ್ಶನ ನೀಡದ ಅಯ್ಯಪ್ಪ ಸ್ವಾಮಿ ದೇವರಲ್ಲ. ತಾಯಿ ಸಮಾನ ಸ್ತ್ರೀಯರಿಂದ ದೂರ ಉಳಿದ ಅಯ್ಯಪ್ಪ ಅವನೇಗೆ ದೇವರಾಗಲು ಸಾಧ್ಯ ಎಂದು ಹೇಳಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.