ಬೆಂಗಳೂರು : ಕೆಪಿಎಸ್ ಸಿ ವಿಳಂಬ ನೀತಿಯಿಂದ ಉದ್ಯೋಕಾಂಕ್ಷಿಗಳು ತೊಂದರೆ ಅನುಭವಿಸುವಂತಾಗಿದೆ. ಇದು ಸರಿಯಾದ ಕ್ರಮವಲ್ಲ ಎಂದು ಖಂಡಿಸಿ ನೂರಾರು ಉದ್ಯೋಕಾಂಕ್ಷಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಬಿಜೆಪಿ ಶ ಶಾಸಕ ಸುರೇಶಕುಮಾರ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನೆಡೆಯಿತು. ಬಳಿಕ ಕೆಪಿಎಸ್ ಸಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸುರೇಶ್ ತಕ್ಷಣವೇ ನೇಮಕಾತಿ ಪ್ರಕಟಿಸುವಂತೆ ಒತ್ತಾಯಿಸಿದ್ದಾರೆ.
2016 ಆಗಸ್ಟ್ ನಲ್ಲಿ ಸಿ ಗ್ರೂಪ್ ಆಕಾಂಕ್ಷಿಗಳು ಪರೀಕ್ಷೆ ಬರೆದಿದ್ದರು ಆದರೆ ಆ ಪಟ್ಟಿ ಈವರೆಗೆ ಪ್ರಕಟಿಸಿಲ್ಲ ಎಂದು ಉದ್ಯೋಕಾಂಕ್ಷಿಗಳು ಗರಂ ಆಗಿದ್ದಾರೆ. ನೇಮಕಾತಿಯಲ್ಲಿ ವಿಳಂಬನೀತಿ ಅನುಸರಿಸುತ್ತಿರುವುದರಿಂದ ತೊಂದರೆಯಾಗಿದೆ. ಹೀಗಾಗಿ ತಕ್ಷಣವೇ ಗ್ರೂಪ್ ಸಿ ನೇಮಕಾತಿ ಪಟ್ಟಿ ಪ್ರಕಟಿಸುವಂತೆ ಒತ್ತಾಯ ಮಾಡಿದರು.
ಈ ವೇಳೆ ಕೆಪಿಎಸ್ ಸಿ ವಿಳಂಬ ನೀತಿ ಖಂಡಿಸಿ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮನವಿಗೆ ಸ್ಪಂದಿಸಿದ ಕೆಪಿಎಸ್ ಸಿ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.