ರಾಜ್ಯ

ಸಚಿವರಾಗುವ ಯಾವುದೇ ಅರ್ಜೆಂಟ್ ಇಲ್ಲ, ಬೇಕಿದ್ದರೆ ಇನ್ನೂ ಹದಿನೈದು ದಿನಬಿಟ್ಟು ಕೊಡಲಿ

ಬೆಂಗಳೂರು prajakiran.com : ನಮಗೆ ಸಚಿವರಾಗುವ ಕುರಿತು ಯಾವುದೇ ಅರ್ಜೆಂಟ್ ಇಲ್ಲ. ಬೇಕಿದ್ದರೆ ಇನ್ನೂ ಹದಿನೈದು ದಿನಬಿಟ್ಟು ಕೊಡಲಿ ಎಂದು ಗೋಕಾಕ್ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಬಿಜೆಪಿ ನಾಯಕರಿಗೆ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಡಿಸಿಎಂ ಸ್ಥಾನ ಕೊಡಬೇಕು ಎಂದು ಕೇಳಿಲ್ಲ. ಎಲ್ಲವೂ ಕೇವಲ ಮಾಧ್ಯಮ ಸೃಷ್ಟಿ. ನೀವೇ ಎಲ್ಲ ನಿರ್ಧರಿಸ್ತಿರಿ. ನಮ್ಮೊಳಗೆ ನಡೆದಿರುವ ಬೆಳವಣಿಗೆ ಅಂತ ಹೇಳ್ತಿರಿ. ಕೆಲವೊಂದು ನಮಗೆ ಗೊತ್ತಿರಲ್ಲ ಎಂದರು.

ಬೆಳಗಾವಿ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ ಎಂದು ಹೇಳ್ತಿರಿ. ಎರಡು ಏಕೆ ಮೂರು ಕೊಡಲಿ ನನಗೆ ಅಭ್ಯಂತರವಿಲ್ಲ ಎಂದು ಸಿಡಿಮಿಡಿಗೊಂಡ ರಮೇಶ ಜಾರಕಿಹೊಳಿ ಹನ್ನೊಂದು ಜನರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದರು.

ಸೋತವರಿಗೆ ಕೂಡ ಸಚಿವ ಸ್ಥಾನ ಕೊಡಬೇಕು ಎಂಬುದು ನಮ್ಮ ಒತ್ತಾಯ ಇದೆ. ಈ ಬಗ್ಗೆ ನಾವು ಮನವಿ ಮಾಡ್ತಿವಿ. ಆದರೆ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿರ್ತಿವಿ ಎಂದರು.

ನಾವು ರಾಜೀನಾಮೆ ಕೊಟ್ಟಿವಿ. ರಿಸ್ಕ್ ತಗೊಂಡಿವಿ. ನಮ್ಮಲ್ಲಿ ಒಗ್ಗಟ್ಟಿಲ್ಲ ಎಂಬುದು ಸುಳ್ಳು. ನಾವು ಈಗ ಐವತ್ತು ಜನ ಆಗೈವಿ ಎಂದು ಗೋಕಾಕ್ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಕುಟುಕಿದರು.

Please follow and like us:

Leave a Reply

Your email address will not be published. Required fields are marked *