ಧಾರವಾಡ prajakiran.com : ಪ್ರಧಾನ ಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಶುಕ್ರವಾರಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಯಿತು.
ಇಲ್ಲಿನ ಕಲ್ಯಾಣನಗರ, ಶಿವಗಿರಿ, ಉಳವಿ ಚೆನ್ನಬಸವೇಶ್ವರ ನಗರಗಳಲ್ಲಿ ಶಾಸಕ ಅರವಿಂದ ಬೆಲ್ಲದಅವರ ಮುಂದಾಳತ್ವದಲ್ಲಿ ಕವಿ ಡಾ.ಚೆನ್ನವೀರಕಣವಿ ಸೇರಿದಂತೆ ಅನೇಕ ಸಾರ್ವಜನಿಕರಿಂದ ೬ ಲಕ್ಷ ರೂಪಾಯಿಗಳಿಗೂ ಅಧಿಕದೇಣಿಗೆಯನ್ನು ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಚೆನ್ನವೀರಕಣವಿ, ಭಾರತ ಸೇರಿದಂತೆಇಡೀ ವಿಶ್ವಇಂದುಕೊರೊನಾ ವೈರಸ್ಕಾಟದಿಂದ ತತ್ತರಿಸಿ ಹೋಗಿದೆ.
ನಮ್ಮಕೇಂದ್ರ ಮತ್ತುರಾಜ್ಯ ಸರಕಾರಗಳು ರೋಗ ಹರಡುವಿಕೆತಡೆಗಟ್ಟುವ ಸಲುವಾಗಿ ಎಲ್ಲ ಪ್ರಯತ್ನ ಮಾಡುತ್ತಿದೆ.
ಸಾರ್ವಜನಿಕರಆರೋಗ್ಯರಕ್ಷಣೆಯನ್ನುಆದ್ಯತೆಯಾಗಿ ಪರಿಗಣಿಸಿರುವ ಸರಕಾರಅಪಾರ ಪ್ರಮಾಣದ ಹಣವನ್ನು ವ್ಯಯಿಸಬೇಕಿದೆ ಎಂದರು.
ಲಾಕ್ಡೌನ್ನಿಂದ ವ್ಯಾಪಾರ–ವಹಿವಾಟು ಸ್ಥಗಿತಗೊಳ್ಳುವುದು ಒಂದುಕಡೆಯಾದರೆ, ಕೊರೊನಾಜಾಗೃತಿ, ತಪಾಸಣೆ, ಚಿಕಿತ್ಸೆಇನ್ನಿತರ ವಲಯಗಳಿಗೆ ಬೃಹತ್ ಮಟ್ಟದಖರ್ಚು ನಿಭಾಯಿಸಬೇಕಿದೆ.
ಆದ್ದರಿಂದ ಉದ್ಯಮಿಗಳು, ವ್ಯಾಪಾರಸ್ಥರು, ಸಿರಿವಂತರು ಮಾತ್ರವಲ್ಲದೇ ಸಾರ್ವಜನಿಕರುತಮ್ಮ ಶಕ್ತಾನುಸಾರ ಪರಿಹಾರ ನಿಧಿಗೆ ಹಣ ನೀಡಬೇಕುಎಂದು ಮನವಿ ಮಾಡಿದರು.
ಮಾಜಿ ಮೇಯರ ಶಿವು ಹಿರೇಮಠ, ಉದ್ಯಮಿ ನಾಗರಾಜ ಯಲಿಗಾರ, ಪ್ರಾಚಾರ್ಯ ಶಶಿಧರ ತೋಡಕರ, ಕಿರಣ ಶಿಂಧೆ, ಪಂಚಾಕ್ಷರಯ್ಯ ಜೊತೆಗಿದ್ದರು.
ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ
ಕರೊನಾ ವಿರುದ್ಧದ ಹೋರಾಟಕ್ಕೆ ಸಾರ್ವಜನಿಕರಿಂದ ಸರ್ಕಾರಕ್ಕೆ ಬೆಂಬಲ ಹರಿದು ಬರುತ್ತಿದೆ. ಮುಖ್ಯಮಂತ್ರಿಗಳ ಕೊವಿಡ್ ಪರಿಹಾರ ನಿಧಿಗೆ ಅಖಿಲಭಾರತ ವೀರಶೈವ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಅಧ್ಯಕ್ಷ ಗುರುರಾಜ ಹುಣಸಿಮರದ ಅವರು ೨ಲಕ್ಷ ರೂ ದೇಣಿಗೆ ನೀಡಿದ್ದಾರೆ.
ಅದೇ ರೀತಿ ನ್ಯೂ ಹೋಮ್ ಬಿಲ್ಡರ್ಸ್ ವತಿಯಿಂದ ಕೆ.ವಿ.ಶಂಕರಗೌಡ ಅವರು ೧,೧೧,೧೧೧ ರೂ.ಗಳು ಹಾಗೂ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ೫೦ ಸಾವಿರ ರೂ.ಗಳ ದೇಣಿಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅಖಿಲಭಾರತ ವೀರಶೈವ ಮಹಾಸಭಾದ ಧಾರವಾಡ ಜಿಲ್ಲಾ ಘಟಕದಶಿವಾನಂದ ಕವಳಿ, ಎಂ.ಎಫ್. ಹಿರೇಮಠ, ಶಿವಶರಣ ಕಲಬಶೆಟ್ಟರ, ಶಂಕರ ಕುಂಬಿ ಬಿ.ಎಸ್.ಗೋಲಪ್ಪನವರ, ರಾಜೇಂದ್ರ ಕಪಲಿ, ಸಿದ್ದು ಕಂಬಾರ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ್ ಉಪಸ್ಥಿತರಿದ್ದರು.