ಧಾರವಾಡ prajakiran.com : ಕರ್ನಾಟಕ ಸಕಾರದ ಕಾರ್ಮಿಕ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಜಿಲ್ಲೆಯ ಅಸಂಘಟಿತ ವಲಯದ ಕಾರ್ಮಿಕರಿಗೆ ೭.೫ ಲಕ್ಷ ರೂ.ವೆಚ್ಚದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸುವ ಕಾರ್ಯಕ್ಕೆ ಬೃಹತ್,ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿಂದು ಅಸಂಘಟಿತ ವಲಯದ ಕಾರ್ಮಿಕ ಸಂಘದ ಅಧ್ಯಕ್ಷ ದುರುಗಪ್ಪ ಚಿಕ್ಕತುಂಬಳ, ಸುರೇಶ ನಾಡಿಗೇರ ಮತ್ತಿತರರಿಗೆ ಸಚಿವರು ಸಾಂಕೇತಿಕವಾಗಿ ಮಾಸ್ಕುಗಳು ಹಾಗೂ ಸ್ಯಾನಿಟೈಸರ್ ವಿತರಿಸಿದರು.
ಶಾಸಕರಾದ ಬಸವರಾಜ ಹೊರಟ್ಟಿ,ಅರವಿಂದ ಬೆಲ್ಲದ, ಸಿ.ಎಂ.ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ,ಪ್ರಸಾದ ಅಬ್ಬಯ್ಯ,ಪ್ರದೀಪ ಶೆಟ್ಟರ್,ಜಿಲ್ಲಾಧಿಕಾರಿ ದೀಪಾ ಚೋಳನ್, ಸಹಾಯಕ ಕಾರ್ಮಿಕ ಆಯುಕ್ತೆ ಮೀನಾ ಪಾಟೀಲ, ಕಾರ್ಮಿಕ ಅಧಿಕಾರಿಗಳಾದ ಅಶೋಕ ಬಾಳಿಗಟ್ಟಿ, ಮಾರಿಕಾಂಬ, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಕವನ್ ಪಾಟೀಲ ಉಪಸ್ಥಿತರಿದ್ದರು.
ಈ ವೇಳೆ ಜನನಾಯಕರೇ ಸಾಮಾಜಿಕ ಅಂತರ ಮರೆ ಮಾಚಿದ್ದಕ್ಕೆ, ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಜನಸಾಮಾನ್ಯರಿಗೆ ಬುದ್ದಿ ಹೇಳಬೇಕಾದವರೆ ಈ ರೀತಿ ಗುಂಪು ಗುಂಪಾಗಿ ಸಾಮೂಹಿಕವಾಗಿ ನಿಂತು ವಿತರಣೆ ಮಾಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.
ದುರಂತದ ಸಂಗತಿಯೆಂದರೆ ಇದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿಯೇ ಇಂತಹ ಯಡವಟ್ಟು ನಡೆದಿರುವುದು ಜಿಲ್ಲೆಯ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ಪೂರ್ಣೀಮಾ ನಾಗನಗೌಡ ಪಾಟೀಲ ನೀರಲಗಿ prajakiran.com ಎದುರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.