ಬೆಂಗಳೂರು : ವಿಧಾನಸೌಧದ ಆವರಣದಲ್ಲಿರುವ ಕೆಪಿಎಸ್ ಸಿ ಕಚೇರಿಯಲ್ಲಿ ಸಿನಿಯರ್ ಅಸಿಟೆಂಟ್ ಮೇಲೆ ಸಹುದ್ಯೋಗಿಯಿಂದಲೇ ಚಾಕು ಇರಿದ ಘಟನೆ ಸೋಮವಾರ ನಡೆದಿದೆ.
ಈ ಘಟನೆಯಲ್ಲಿ ರಾಮು ಹಾಗೂ ಜಯಲಕ್ಷ್ಮಿಯವರಿಗೆ ಗಂಭೀರ ಗಾಯಗಳಾಗಿದ್ದು, ಅವರಿಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಹಲ್ಲೆ, ಚೀರಾಟ ಕೇಳಿ ಕಚೇರಿ ಸಿಬ್ಬಂದಿ ಬೆಚ್ಚಿ ಬಿದ್ದಿದ್ದು, ಆರೋಪಿ ನಟರಾಜನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಘಟನೆಯಲ್ಲಿ ಗಾಯಗೊಂಡವರನ್ನು ಜಯಲಕ್ಷ್ಮಿ ಹಾಗೂ ರಾಮು ಎಂದು ಗುರುತಿಸಲಾಗಿದೆ. ಸಿಬ್ಬಂದಿ ಮೇಲೆ ನಟರಾಜ್ ಹಲ್ಲೆ ಮಾಡಿದ್ದು, ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಘಟನೆಗೆ ಹಳೇಯ ವೈಷಮ್ಯವೇ ಕಾರಣ ಎನ್ನಲಾಗಿದೆ. ಅಲ್ಲದೆ, ಕಚೇರಿಯಲ್ಲಿನ ಭಿನ್ನಾಭಿಪ್ರಾಯವೇ ಗಲಾಟೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಘಟನಾ ಸ್ಥಳಕ್ಕೆ ಬೆಂಗಳೂರು ಡಿಸಿಪಿ ದೇವರಾಜ್ ಭೇಟಿ ನೀಡಿ, ಇಬ್ಬರ ಆರೋಗ್ಯ ವಿಚಾರಿಸಿ, ಪ್ರಾಥಮಿಕ ಮಾಹಿತಿಯನ್ನು ಕಲೆ ಹಾಕಿದ್ದಾರೆ.
