ಜಿಲ್ಲೆ

ಶಾಸಕ ಅಮೃತ ದೇಸಾಯಿ ಹುಟ್ಟು ಹಬ್ಬ : ನೂರಾರು ಮಕ್ಕಳಿಗೆ ನೋಟ್ ಬುಕ್ ವಿತರಣೆ

ಧಾರವಾಡ : ಧಾರವಾಡ ಶಾಸಕ ಅಮೃತ ದೇಸಾಯಿಯವರ ಹುಟ್ಟುಹಬ್ಬವನ್ನು
ಬಡ ಮಕ್ಕಳಿಗೆ ನೋಟ್ ಬುಕ್, ಅಂಗನವಾಡಿಗೆ ಪಾತ್ರೆ, ಬಡರೋಗಿಗಳಿಗೆ ಹಣ್ಣುಹಂಪಲು, ಅನ್ನ ಪ್ರಸಾದ ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹೊನ್ನಮ್ಮ ಮಕ್ಕಳ ಶಾಲೆಯ ನೂರಾರು ಮಕ್ಕಳಿಗೆ ಸ್ವತಃ ಶಾಸಕ ಅಮೃತ ದೇಸಾಯಿ ಉಣಬಡಿಸುವ ಮೂಲಕ ಸಾರ್ಥಕತೆ ಮೆರೆದರು. ಅದೇ ರೀತಿ ಬಿಜೆಪಿಯ ಗ್ರಾಮೀಣ ಘಟಕ ಜಿಲ್ಲಾಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಸಂತೋಷ ಹಂಚಿಕೊಂಡರು.

ಇನ್ನೂ ಮೂರನೇ ವಾರ್ಡನಲ್ಲಿರುವ ಆದರ್ಶನಗರ ಅಂಗನವಾಡಿಗೆ ಪಾತ್ರೆಗಳನ್ನು ವಿತರಿಸಿ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸಂಭ್ರಮವನ್ನು ಹಂಚಿಕೊಂಡರು.

ಇದೇ ವೇಳೆ ಜಿಲ್ಲಾಸ್ಪತ್ರೆಯ ಕೆಲವು ವಿಕಲಚೇತನರಗೆ ವೀಲ್ ಚೇಲ್ ವಿತರಿಸಲಾಯಿತು. ಅದೇ ರೀತಿ ನರೇಂದ್ರ ಗ್ರಾಮದ ವಿಶೇಷ ಮಕ್ಕಳ ವಸತಿ ನಿಲಯಕ್ಕೆ ಪಾತ್ರೆ ವಿತರಿಸಲಾಯಿತು.

ಹೀಗೆ ಹತ್ತು ಹಲವು ಕಡೆ ಧಾರವಾಡ ತಾಲೂಕಿನ ವಿವಿಧೆಡೆ ಬಿಜೆಪಿ ಕಾರ್ಯಕರ್ತರು, ಅಮೃತ ದೇಸಾಯಿ ಗೆಳೆಯರ ಬಳಗ ಹಾಗೂ ಅಮೃತ ದೇಸಾಯಿ ಅಭಿಮಾನಿ ಬಳಗದ ಕಾರ್ಯಕರ್ತರು ಅರ್ಥಪೂರ್ಣ ಆಚರಣೆ ನಡೆಸಿಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ತವನಪ್ಪ ಅಷ್ಟಗಿ, ಟಿ.ಎಸ್. ಪಾಟೀಲ, ಶಂಕರ ಶೇಳಕೆ, ಈರಣ್ಣ ಹಪ್ಪಳಿ, ಸಿದ್ದು ಕಲ್ಯಾಣ ಶೆಟ್ಟಿ, ವಿರೇಶ ಅಂಚಟಗೇರಿ, ಶಂಕರ ಪಟ್ಟಣಶೆಟ್ಟಿ , ಮಂಜು ನಡಟ್ಟಿ, ಅಮೃತ ದೇಸಾಯಿ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *