ರಾಜ್ಯ

ಹೆಬ್ಬಟ್ಟು ಒತ್ತಕ್ಕೆ ಚೀಫ್ ಮಿನಿಸ್ಟರ್ ಇಲ್ಲ ಎಂದ ಹೊರಟ್ಟಿ

ಬೆಳಗಾವಿ : ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮೀಶ್ರ ಸರಕಾರದಲ್ಲಿ ಹಂಗಾಮಿ ಸಭಾಪತಿ ಹುದ್ದೆಯಿಂದ ಪೂರ್ಣಾವಧಿ ಸಭಾಪತಿ ಹುದ್ದೆಗೆ ಏರಬೇಕಾದ ಬಸವರಾಜ ಹೊರಟ್ಟಿ ಅವರು ಬುಧವಾರ ಬೆಳಗ್ಗೆ ಸಭಾಪತಿ ಹುದ್ದೆ ತಪ್ಪಿದಾಗಲೇ ತಮ್ಮ ನೂತನ ಸಭಾಪತಿ ಪ್ರತಾಪ ಚಂದ್ರಶೆಟ್ಟಿಯವರಿಗೆ ಎಷ್ಟು ಸೂಟ್ ಕೇಸ್ ಕೊಟ್ಟಿರಿ ಎಂಬ ಪ್ರಶ್ನೇ ಕೇಳಿ ಮುಜುಗರಕ್ಕೆ ಸಿಲುಕಿಸಿದ್ದರು.

ಆನಂತರ ಮಾಧ್ಯಮಗಳಿಗೆ ಮಾತನಾಡಿ ತಮ್ಮ ಅಸಮಾಧಾನ ಹೊರ ಹಾಕಿದ್ದ ಅವರು ಸಂಜೆ ವೇಳೆ ಮತ್ತೇ ತಮ್ಮ ಬೇಸರ ಹಾಕಿದ್ದು, ಹೆಬ್ಬಟ್ಟು ಒತ್ತಕ್ಕೆ ಚೀಫ್ ಮಿನಿಸ್ಟರ್ ಇಲ್ಲ ಎಂದು ತಮ್ಮ ಪಕ್ಷದ ನಾಯಕರ ವಿರುದ್ದವೇ ಗುಡುಗು ಹಾಕಿದ್ದಾರೆ.

ಸಮ್ಮೀಶ್ರ ಸರಕಾರದಲ್ಲಿ ಮೈತ್ರಿ ಧರ್ಮ ಪಾಲಿಸಬೇಕಾದ ಕಾಂಗ್ರೆಸ್ ನಾಯಕರು ಆರಂಭದಲ್ಲಿ ನೀಡಿದ ಸಹಕಾರ, ಬೇಷರತ್ ಬೆಂಬಲ ಈಗ ಏಕಿಲ್ಲ ಎಂದು ಬಸವರಾಜ ಹೊರಟ್ಟಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕರು ಇದೆ ತರಹ ಮುಂದುವರೆದರೆ ಹೆಬ್ಬಟ್ಟು ಒತ್ತಕ್ಕೆ ಚೀಫ್ ಮಿನಿಸ್ಟರ್ ಇಲ್ಲ. ಅವರು ಗಟ್ಟಿಯಾದ ನಿಲುವು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಸಲಹೆ ಮಾಡಿದ್ದಾರೆ.

ಆರಂಭದಲ್ಲಿ ಸಮ್ಮೀಶ್ರ ಸರಕಾರ ಮಾಡುವಾಗ ಕಾಂಗ್ರೆಸ್ ನವರು ಏನ್ ಮಾತು ಕೊಟ್ಟಿದ್ದೀರೂ ಹಂಗ್ ನಡೆದುಕೊಂಡಿಲ್ಲ. ಮುಂದೆ ಹೀಂಗ ಆಗಬಾರದು. ಈ ಬಗ್ಗೆ ಕುಳಿತು ಮಾತನಾಡಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

ಆ ಮೂಲಕ ಸಮ್ಮೀಶ್ರ ಸರಕಾರದಲ್ಲಿ ಅಂದುಕೊಂಡಂತೆ ಎಲ್ಲವೂ ನಡೆಯುತ್ತಿಲ್ಲ. ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಮಾತಿಗೆ ತಲೆಯಾಡಿಸುತ್ತಿದ್ದಾರೆ ಎಂದು ಜೆಡಿಎಸ್ ನಾಯಕರು ಗೊಣಗುವಂತಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಒಟ್ಟಿನಲ್ಲಿ ಜೆಡಿಎಸ್ ನವರ ಹೇಳಿದ ಹಾಗೆ ಕೇಳುತ್ತಿಲ್ಲ ಕಾಂಗ್ರೆಸ್ ನವರು ಹೇಳಿದ ಹಾಗೆ ಕೇಳುತ್ತಿದ್ದಾರೆ ಎಂದು ಜೆಡಿಎಸ್ ಗೊಳಗಿದರೆ, ಕಾಂಗ್ರೆಸ್ ಹೇಳಿದ ಒಂದು ಮಾತು ಸಹ ಕೇಳುತ್ತಿಲ್ಲ. ಬರೀ ಜೆಡಿಎಸ್ ದರ್ಬಾರ್ ಜೋರಾಗಿದೆ ಎಂದು ಕಾಂಗ್ರೆಸ್ ನವರು ಗೊಳಗುತ್ತಿರುವುದು ಸುಳ್ಳಲ್ಲ.

Please follow and like us:

Leave a Reply

Your email address will not be published. Required fields are marked *