ರಾಜ್ಯ

ಸಮ್ಮೀಶ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ….!?

ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಿರುವ ಮಾಜಿ ಸಚಿವ ಹಾಗೂ ಹಾಲಿ ಭಾಲ್ಕಿ ವಿಧಾನ ಸಭಾ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಕೇಳಿದ ಪ್ರಶ್ನೆಯೊಂದು ಸಮ್ಮಿಶ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು.

ರಾಜ್ಯದ ಎಲ್ಲೆಡೆ ಬರ ತಾಂಡವವಾಡುತ್ತಿದ್ದು, ಈಗಾಗಲೇ ಅನೇಕ ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಆದರೆ ಅದರಿಂದ ಭಾಲ್ಕಿ ತಾಲೂಕನ್ನು ಹೊರಗೀಡಲಾಗಿದೆ.

ಭಾಲ್ಕಿಯನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿಲ್ಲ. ಬರಪೀಡಿತ ತಾಲೂಕು ಘೋಷಣೆಗೆ ಸಮ್ಮಿಶ್ರ ಸರಕಾರ ಪಕ್ಷಪಾತ ಮಾಡಿದೆ. ಇದು ಸರಿಯಾದ ಬೆಳವಣಿಗೆಯಲ್ಲ. ಇದರಿಂದ ಕ್ಷೇತ್ರದ ಜನತೆಗೆ ನಾನು ಏನೆಂದೂ ಉತ್ತರಿಸಬೇಕು ಎಂಬ ಸಂಕಷ್ಟ ಎದುರಾಗಿದೆ ಎಂದು ಪ್ರಶ್ನೆ ಕೇಳುವ ಮೂಲಕ ಕ್ಷಣ ಕಾಲ ಇಡೀ ಸದನ ತಬ್ಬೀಬ್ಬು ಆಗುವಂತೆ ಮಾಡಿದರು.

ಬಳಿಕ ಸಾವರಿಸಿಕೊಂಡ ಕಂದಾಯ ಸಚಿವರು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಹಾಲಿ ಭಾಲ್ಕಿ ವಿಧಾನ ಸಭಾ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರ ಪ್ರಶ್ನೆಗೆ ಉತ್ತರ ನೀಡುವ ಮೂಲಕ ತೇಪೆ ಹಾಕಿದರು.

ಒಟ್ಟಿನಲ್ಲಿ ಸಮ್ಮೀಶ್ರ ಸರಕಾರದಲ್ಲಿ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದ್ದು, ಎಲ್ಲವೂ ಸರಿಯಲ್ಲ ಎಂಬುದು ಪದೇ ಪದೇ ರುಜುವಾತಾಗುತ್ತಲೇ ಇರುವುದು ಮಾತ್ರ ಸುಳ‍್ಳಲ್ಲ.

Please follow and like us:

Leave a Reply

Your email address will not be published. Required fields are marked *