ಚಿತ್ರದುರ್ಗ: ಬಾಲಕನ ಕಣ್ಣಲ್ಲಿ ರಬ್ಬರ್ ರೀತಿಯ ಕಲ್ಲುಗಳು ಒಂದರ ಒಂದು ತಾನಾಗಿಯೇ ಹೊರ ಬರುತ್ತಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ತಣಿಗೆಕಲ್ಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದು ವೈಧ್ಯ ಲೋಕಕ್ಕೆ ಸವಾಲ್ ಆಗಿ ಪರಿಣಮಿಸಿದೆ.
ಗ್ರಾಮದ ರೇವಣ ಸಿದ್ದಪ್ಪ ಹಾಗೂ ರೂಪಾ ದಂಪತಿಯ ಪುತ್ರ ಮಿಥುನ್ ಗೆ ಈಗ ಕೇವಲ 10 ವರ್ಷ. ಕಣ್ಣಲ್ಲಿ ಬರುವ ರಬ್ಬರ್ ರೀತಿಯ ಕಲ್ಲು ಕಂಡು ಸ್ವತಃ ಬಾಲಕ ಹಾಗೂ ಆತನ ಪೋಷಕರು ಅಚ್ಚರಿಗೊಂಡಿದ್ದು, ಆತಂಕಕ್ಕೆ ಸಿಲುಕಿದ್ದಾರೆ.
ಈ ರೀತಿಯ ಕಲ್ಲುಗಳು ಕಣ್ಣಲ್ಲಿ ಏಕಾಎಕಿ ಬರಲು ಆರಂಭಿಸಿದ್ದು, ಕಳೆದ ಒಂದು ವಾರದಿಂದ ಕಲ್ಲುಗಳು ಬರಲಾರಂಭಿಸಿವೆ.
ಕಣ್ಣಲ್ಲಿ ಈ ರೀತಿ ಕಲ್ಲು ಬರುತ್ತಿರುವುದರಿಂದ ಕಣ್ಣು ನೋವು ಪಡುತ್ತಿರುವ ಬಾಲಕ ಮಿಥುನ್ ಇದೀಗ ಚಿಕಿತ್ಸೆಗಾಗಿ ಹೊಸದುರ್ಗ ಆಸ್ಪತ್ರೆಗೆ ದಾಖಲು ಆಗಿದ್ದಾನೆ.
ಆತನ ತಪಾಸಣೆ ನಂತರ ಇನ್ನಷ್ಟು ವಿಷಯಗಳು ಬೆಳಕಿಗೆ ಬರಲಿವೆ. ಬಾಲಕನ ಕಣ್ಣಲ್ಲಿನ ಕಲ್ಲು ಕಂಡು ವೈದ್ಯರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.