ರಾಜ್ಯ

ಪ್ರಜ್ವಲ್ ರೇವಣ್ಣಗೆ ಅಕ್ರಮ ಭೂ ಒತ್ತುವರಿ ಕಂಟಕ……..!?

ಬೆಂಗಳೂರು : ಸಮ್ಮೀಶ್ರ ಸರಕಾರದ ಪ್ರಭಾವಿ ಸಚಿವ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ನಿಗೆ ಅಕ್ರಮ ಭೂ ಒತ್ತುವರಿ ಕಂಟಕ ಎದುರಾಗಿದೆ.

ಮಾಜಿ ಸಚಿವ ಎ. ಮಂಜು ಅವರು ಈ ಹಿಂದೆ ಈ ಬಗ್ಗೆ ಹಾಸನ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.

ಈ ಸಂಬಂಧ ಬುಧವಾರ ಬೆಂಗಳೂರಿನ ವಿಶೇಷ ಭೂ ಕಬಳಿಕೆ ತಡೆ ನ್ಯಾಯಾಲಯ ಅರ್ಜಿಯ ವಿಚಾರಣೆ ನಡೆಸಿ, ಹಾಸನ ಜಿಲ್ಲಾಧಿಕಾರಿಗಳಿಗೆ ಸ್ಥಳಪರಿಶೀಲನೆ ನಡೆಸಿ, ಸಮಗ್ರ ವರದಿ ನೀಡುವಂತೆ ಸೂಚಿಸಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ದ ಕೇಳಿ ಬಂದ ಭೂ ಕಬಳಿಕೆ ದೂರು ಕುರಿತು ಜನೆವರಿ 14ರ ಒಳಗೆ ಹಾಸನ ಜಿಲ್ಲಾಧಿಕಾರಿ ಕಂದಾಯ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಿ, ಅದು ಸರಕಾರಿ ಭೂಮಿನಾ, ಅದರ ಖರೀದಿಗೆ ಪ್ರಜ್ವಲ್ ರೇವಣ್ಣ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆಯೇ, 69 ಎಕರೆ ಜಮೀನಿನ ಮೂಲ ದಾಖಲೆಗಳ ಕುರಿತು ವಿಶೇಷ ನ್ಯಾಯಾಲಯ ವರದಿ ಕೇಳಿದೆ.

ಹಾಸನ ತಾಲೂಕಿನ ದುದ್ದ ಹೊಬಳಿಯ ಗೌರಿಪುರ ಹಾಗೂ ಸೋಮನಪುರ ಪ್ರದೇಶದಲ್ಲಿರುವ 69 ಎಕರೆ ಪ್ರದೇಶ ಅದು ಸರಕಾರಿ ಜಮೀನು. ಅದನ್ನು ನಕಲಿ ದಾಖಲೆ ಸೃಷ್ಟಿಸಿ ಖರೀದಿ ಮಾಡಲಾಗಿದೆ ಎಂಬಂತೆ ತೋರಿಸಿ, ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಮಾಜಿ ಸಚಿವ ಎ. ಮಂಜು ದೂರು ದಾಖಲಿಸಿದ್ದರು.

ಅದು ಮೂಲತಃ ಸರಕಾರಿ ಜಮೀನು ಆಗಿದ್ದು, ಅದರ ಖರೀದಿಗೆ ಕಾನೂನಿನಲ್ಲಿ ಆಸ್ಪದವಿಲ್ಲ. ಆದರೆ ಅದಕ್ಕೆ ವಾರಸುದಾರರನ್ನು ಸೃಷ್ಟಿಸಿ, ಅವರ ಹೆಸರಿನಲ್ಲಿ ದಾಖಲೆಗಳನ್ನು ತಯಾರಿಸಿ, ಆನಂತರ ಅವರಿಂದ ಖರೀದಿ ಮಾಡಲಾಗಿದೆ ಎಂಬಂತೆ ಬಿಂಬಿಸಲಾಗಿದೆ ಎಂಬುದು ಮಾಜಿ ಸಚಿವ ಎ. ಮಂಜು ಆರೋಪ.

ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಅಕ್ರಮ ಭೂ ಕಂಟಕ ಕಾಡುವ ಸಾಧ್ಯತೆ ಕಂಡು ಬರುತ್ತಿದ್ದು, ಜಿಲ್ಲಾಧಿಕಾರಿಗಳು ನೀಡುವ ವರದಿ ಮೇಲೆ ಅವರ ಮುಂದಿನ ಭವಿಷ್ಯ ನಿಂತಿದೆ.

Please follow and like us:

Leave a Reply

Your email address will not be published. Required fields are marked *