ರಾಜ್ಯ

ಕಣ್ಣೀರು ಹಾಕಿದ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ……….!

ಬೆಳಗಾವಿ : ಕಳೆದ ಹಲವು ತಿಂಗಳಿಂದ ಕಾಂಗ್ರೆಸ್ ಜೆಡಿಎಸ್ ಸಮ್ಮೀಶ್ರ ಸರಕಾರದಲ್ಲಿ ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ಕಾರ್ಯನಿರ್ವಹಿಸಿದ ಬಸವರಾಜ ಹೊರಟ್ಟಿ ಅವರು ಬುಧವಾರ ನೂತನ ಸಭಾಪತಿ ಕಾಂಗ್ರೆಸ್ ನ ಹಿರಿಯ ಸದಸ್ಯ ಪ್ರತಾಪಚಂದ್ರಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದು ನಡೆದ ವಿಧಾನಪರಿಷತ್ ಕಲಾಪದ ಆರಂಭದಲ್ಲಿ ಡಾ. ಜಿ. ಪರಮೇಶ್ವರ ಅವರು ಹೆಸರು ಪ್ರಸ್ತಾಪಿಸಿದರು. ಅದಕ್ಕೆ ಎಲ್ಲ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಮೇಜು ಕುಟ್ಟಿ ಬೆಂಬಲ ಸೂಚಿಸಿದರು.

ಆಗ ಹಂಗಾಮಿ ಸಭಾಪಿತ ಬಸವರಾಜ ಹೊರಟ್ಟಿ ನೂತನ ಸಭಾಪತಿಯನ್ನು ಅಧಿಕಾರ ಸ್ವೀಕರಿಸುವಂತೆ ಕೋರಿದರು. ಸದಸ್ಯರ ಒತ್ತಾಸೆಯಂತೆ ನೂತನ ಸಭಾಪತಿಯಾಗಿ ಪ್ರತಾಪಚಂದ್ರಶೆಟ್ಟಿ ಅಧಿಕಾರ ಸ್ವೀಕರಿಸಿದರು.

ಹಂಗಾಮಿ ಸಭಾಪತಿ ಸ್ಥಾನದಿಂದ ನಿರ್ಗಮನದ ವೇಳೆ ಬಸವರಾಜ ಹೊರಟ್ಟಿ ಅವರು ಕಣ್ಣಂಚಿನಲ್ಲಿ ನೀರು ಜಿನಿಗಿತು. ಇದು ಆನಂದ ಬಾಷ್ಪವೇ ಹೊರತು ಬೇರೆನೂ ಅಲ್ಲ ಎಂದರು.

ಸಭಾಪತಿ ಸ್ಥಾನದ ಮೇಲೆ ಕಾರ್ಯನಿರ್ವಹಿಸಿದ್ದೆ. ಇದು ಭಾವನಾತ್ಮಕ ಸೆಳೆತ. ಕಳೆದ ಹಲವು ದಿನಗಳಿಂದ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ್ದೆ. ಪಕ್ಷದ ವರಿಷ್ಟರು ಇಚ್ಛೆ ಪಟ್ಟಲಿ ಪೂರ್ಣವಧಿಗೂ ಸಭಾಪತಿಯಾಗಿ ಮುಂದುವರೆಯಲಾಗುವುದು ಎಂದು ಹೇಳಿದ್ದೆ. ಆದರೆ ಸಮ್ಮೀಶ್ರ ಸರಕಾರವಿರುದ್ದರಿಂದ ಸಭಾಪತಿ ಸ್ಥಾನ ಅವರಿಗೆ ಬಿಟ್ಟುಕೊಡಲಾಗಿದೆ ಎಂದು ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.

ಬಿಎಸ್ಪಿ ಶಾಸಕ ಎನ್. ಮಹೇಶ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಮ್ಮ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ಈವರೆಗೆ ಖಾಲಿಯಿದೆ. ಸಮ್ಮೀಶ್ರ ಸರಕಾರದ ಆರಂಭದ ದಿನದಿಂದಲೂ ಶಿಕ್ಷಣ ಸಚಿವ ಸ್ಥಾನದ ಮೇಲೆ ಕಣ್ಣೀಟ್ಟ ಬಸವರಾಜ ಹೊರಟ್ಟಿ ಅವರು ಇಂದು ಸಭಾ ಪತಿ ಸ್ಥಾನದಿಂದ ಇಂದು ನಿರ್ಗಮಿಸಬೇಕಾಯಿತು. ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಮತ್ತೇ ಶಿಕ್ಷಣ ಸಚಿವರಾಗುವ ಸುಯೋಗವಿದೆ ಎಂದು ಹೇಳಲಾಗುತ್ತಿದೆ.

Please follow and like us:

Leave a Reply

Your email address will not be published. Required fields are marked *