ಧಾರವಾಡ : ನಗರದ ನವಲೂರ ಅಗಸಿಯ ವಾಲ್ಮೀಕಿ ಓಣಿ, ಆರೇರ ಓಣಿ, ಪಾರ್ಶ್ವನಾಥ ಕಾಲನಿ, ನಂದಿಕೋಲ ಗುಡಿ ಓಣಿ, ಸುಣಗಾರ ಓಣಿ, ಜೋಶಿ ಗಲ್ಲಿ ಹಿಂಭಾಗ ಮತ್ತು ಮುಂಭಾಗದ ರಸ್ತೆ ಕಾಮಗಾರಿಗೆ ಬಿಜೆಪಿ ಗ್ರಾಮೀಣ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.
ಇದೇ ವೇಳೆ ಸ್ವಚ್ಚ ಭಾರತ ಅಡಿಯಲ್ಲಿ ನಿರ್ಮಾಣಗೊಂಡ ನವಲೂರ ಅಗಸಿಯ ತುರಮುರಿ ಪ್ಲಾಟ್, ಉಡುಪಿ ಓಣಿಯ ಸಾರ್ವಜನಿಕ ಶೌಚಾಲಯ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯ ಶಂಕರ ಶೇಳಕೆ, ಮಂಜುನಾಥ ಹಿರೇಮಠ, ನೇತಾಜಿ ಕದಂ, ಶ್ರೀಕಾಂತ ಶೇಳಕೆ, ಹನುಮಂತ ಕಾಳೆ, ಕೃಷ್ಣಾ ಭೋಸಲೆ, ಅಶೊಕ ಹನಸಿ, ಶಿವಾಜಿ ಕಾಳೆ, ಬಸು ಸಾಧನಿ, ತಾನಾಜಿ ರೋಖಡೆ, ಶೀತಲ ಬಡವಿ, ಅನಿಲ ಕರಾಡೆ, ಮಂಜು ಸೊಗಲದ, ರಾಮಪ್ಪ ಶಾವಣ್ಣವರ, ಈರಪ್ಪ ಹಾವೇರಿ, ಈರಣ್ಣ ಸೋಗಿ, ವೀರಬಸಪ್ಪ ಹೂಗಾರ, ಚಂದ್ರಶೇಖರ ಪವಾರ, ಸುರೇಶ ಪವಾರ, ಚನ್ನಪ್ಪ ಅಂಬಲಿ, ಹುಸೇನಸಾಬ ಪಟೇಲ, ಮಂಜುನಾಥ ಮಾಲನವರ, ಬಾಬು ಪವಾರ, ಶಿವಾಜಿ ಘಾಟಗೆ, ಶಿವಾಜಿರಾವ ಜಾಧವ, ಪಾಲಿಕೆ ೨ ರ ವಲಯ ಅಧಿಕಾರಿ ಕೆ.ಎಂ. ಹಂಚಿನಮನಿ, ಜ್ಯೂನಿಯರ್ ಇಂಜಿನಿಯರ್ ರವಿನಾ .ಟಿ. ದಾನಿ, ಉಪಸ್ಥಿತರಿದ್ದರು.