ಅಂತಾರಾಷ್ಟ್ರೀಯ

ಜೈಲಿನಲ್ಲಿಯೇ ಶಶಿಕಲಾ ನಟರಾಜನ್ ಗೆ ಐಟಿ ಬಿಸಿ……….!

ಬೆಂಗಳೂರು : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅವರಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೇ ಆದಾಯ ತೆರಿಗೆ ಅಧಿಕಾರಿಗಳು ಬಿಸಿ ತಾಕಿಸಿದ್ದಾರೆ.

ಕಳೆದ ನವೆಂಬರ್ ತಿಂಗಳಲ್ಲಿ ನಡೆದಿದ್ದ ಐಟಿ ದಾಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹ ಮಾಡಲು ಐಟಿ ಅಧಿಕಾರಿಗಳು ಜೈಲಿಗೆ ಆಗಮಿಸಿದ್ದು, ಶಶಿಕಲಾಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ತಮಿಳುನಾಡಿದ ಐಟಿ ಅಧಿಕಾರಿ ವೀರ್ ರಾಘವ ರಾವ್ ನೇತೃತ್ವದ ತಂಡದಿಂದ ಪ್ರಶ್ನೆಗಳ ಸುರಿಮಳೆ ಹರಿಸಲಾಗಿದ್ದು, ಶಶಿಕಲಾ ಕಕ್ಕಾಬಿಕ್ಕಿಯಾಗಿದ್ದಾರೆ.

ಶಶಿಕಲಾ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲಿನಲ್ಲಿರುವುದರಿಂದ ಅಲ್ಲಿಂದಲೇ ಮಾಹಿತಿ ಸಂಗ್ರಹ ಮಾಡಬೇಕಾದ ಅನಿವಾರ್ಯತೆ ಐಟಿ ಅಧಿಕಾರಿಗಳಿಗೆ ಎದುರಾಗಿತ್ತು.

ಹೀಗಾಗಿ ಶಶಿಕಲಾ ಅವರು ಜೈಲಿನಲ್ಲಿದ್ದರೂ ಅವರಿಗೆ ನೆಮ್ಮದಿ ಇಲ್ಲದ ವಾತವರಣ ನಿರ್ಮಾಣವಾದಂತಾಗಿದೆ.

ಕಳೆದ ನವೆಂಬರ್ ನಲ್ಲಿ ಶಶಿಕಲಾ ನಟರಾಜನ್ ಅವರ ಮನೆ, ಸಾವಿರಕ್ಕೂ ಅಧಿಕ ಸಂಬಂಧಿಕರ ಮನೆ, ಜಯ ಟಿವಿ ಕಚೇರಿ ಹಾಗೂ ಶಶಿಕಲಾ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಈ ಐಟಿ ದಾಳಿ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ವಾರವೇ ಜೈಲು ಅಧಿಕಾರಿಗಳ ಪರವಾನಿಗೆ ಪಡೆದ ಐ ಟಿ ಅಧಿಕಾರಿಗಳ ತಂಡ ಡಿ. 13 ಹಾಗೂ 14ರಂದು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ವಿಚಾರಣೆ ಬಳಿಕ ಶಶಿಕಲಾ ನಟರಾಜನ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಗಳಿದ್ದು, ಇನ್ನಷ್ಟು ಪ್ರಕರಣ ದಾಖಲಾಗಿ, ಮತ್ತಷ್ಟು ದಿನಗಳ ಕಾಲ ಜೈಲಿನಲ್ಲಿ ಮುದ್ದೆ ಮುರಿಯಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಲೆಕ್ಕಚಾರ ಹಾಕಲಾಗುತ್ತಿದೆ.

Please follow and like us:

Leave a Reply

Your email address will not be published. Required fields are marked *