ರಾಜ್ಯ

ಆದ್ಯತೆ ಮೇಲೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ

ಬೆಳಗಾವಿ : ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಿ ಎಂದು ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ ಆಗ್ರಹಿಸಿದ್ದಾರೆ.

ಅವರು ಗುರುವಾರ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದಲ್ಲಿ ಮಾತನಾಡಿ, ರಾಜ್ಯ ಸರಕಾರದ ಆದ್ಯತೆ ಏನೆಂದು ಗೊತ್ತಾಗುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ ಮೊದಲು ಕೈಗೆತ್ತಿಕೊಳ್ಳಿ, ನಿಮಗೆ ಬೇಕಿದ್ದರೆ ಆನಂತರ ಮಂಡ್ಯದ ಕೆ ಆರ್ ಎಸ್ ಡ್ಯಾಂ ಮುಂಭಾಗದಲ್ಲಿ ಆನಂತರ ಡಿಸ್ನಿಲ್ಯಾಂಡ್ ಆದರೂ ಮಾಡಿ ಏನಾದರೂ ಮಾಡಿ ಎಂದು ಕುಟುಕಿದ್ದಾರೆ.

ಡಿಸ್ನಿಲ್ಯಾಂಡ್ ವಿರುದ್ದ ಸದನದಲ್ಲಿ ಇಂಡಿ ಶಾಸಕ ಯಶವಂತರಾಯ್ ಗೌಡ ಪಾಟೀಲ ಧ್ವನಿ ಎತ್ತುತ್ತಿದ್ದಂತೆ ಇದಕ್ಕೆ ಬೆಂಬಲಿಸಿದ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಡಿಸ್ನಿ ಲ್ಯಾಂಡ್ ನಿರ್ಮಾಣ ಯೋಜನೆಗೆ ನಿಮ್ಮ ಹಣ ಖರ್ಚು ಆಗಿಲ್ಲ. ಅದು ಪಿಪಿಪಿ ಮೂಲಕ ಮಾಡಲಾಗುತ್ತಿದೆ. ಇದರಲ್ಲಿ ನಿಮ್ಮ ಪಾಲು ಏನೂ ಇಲ್ಲ ಎಂದು ಯಡಿಯೂರಪ್ಪ ಕಿಡಿ ಕಾರಿದರು.

ಅಲ್ಲದೆ, ಈಗಾಗಲೇ ಈ ಯೋಜನೆಗೆ ಇಂಜಿನಿಯರ್ ಗಳು, ಪರಿಸರವಾದಿಗಳು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮಗೆ ಯಾಕೆ ಆ ಬಗ್ಗೆ ಆಸಕ್ತಿ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದ ಡ್ಯಾಂ ಹಾಳಾಗುತ್ತದೆ. ಖಾಸಗಿಯವರಿಗೆ ಯಾಕೆ ಅಷ್ಟೊಂದು ಮನ್ನಣೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಆಗ ಮಧ್ಯ ಪ್ರವೇಶಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರು ಮತ್ತೇ ಈ ಯೋಜನೆಯನ್ನು ಸಮರ್ಥಿಸಿಕೊಂಡ ಅವರು ಇದು ಸರಕಾರದ ಬದ್ದತೆ ಎಂದರು.

ಡ್ಯಾಂಗೆ ಇದು ಸಾಕಷ್ಟು ಮಾರಕವಾದ ಯೋಜನೆ. ಅಲ್ಲಿ ಸ್ಪೋಟಕ ಸಿಡಿಸಿದರೆ, ಬಂಡೆ ಒಡೆದರೆ ಕೆ ಆರ್ ಎಸ್ ಹಾಗೂ ಬೃಂದಾವನದ ಮೂಲ ಸ್ವರೂಪಕ್ಕೆ ಧಕ್ಕೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದಕ್ಕೆ ಅಲ್ಲಿಯ ಶಾಸಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ವಿರೋಧ ಪಕ್ಷದಿಂದ ಕೂಡ ಕಟು ಟೀಕೆ ಎದುರಾಗಿರುವುದು ವಿಶೇಷ.

Please follow and like us:

Leave a Reply

Your email address will not be published. Required fields are marked *