ರಾಜ್ಯ

ಅವಶೇಷಗಳಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರ ಸಾವು

ಬೆಂಗಳೂರು : ರಾಜ್ಯದ ರಾಜಧಾನಿ ಬೆಂಗಳೂರಿನ ವೈಟ್ ಫಿಲ್ಡ್ ನ ಹೋಪ್ ಫಾರಂ ನಲ್ಲಿರುವ ಹೋಲಿ ಸೋಲ್ ಗೋದಾಮಿನಲ್ಲಿ ಅವಘಡವೊಂದು ಸಂಭವಿಸಿದೆ.

ಬೃಹತ್ ಗೋದಾಮಿನಲ್ಲಿದ್ದ ಕಬ್ಬಿಣದ ರಾಕ್ ಕುಸಿದು ಬಿದ್ದ ಪರಿಣಾಮ ಹಲವು ಕಾರ್ಮಿಕರು ಅದರ ಅವಶೇಷಗಳಡಿ ಸಿಲುಕಿಕೊಂಡಿದ್ದರು. ಅದರ ಪೈಕಿ ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತರನ್ನು ಫಾರೂಕ್ ಹಾಗೂ ಸುಭಾಸ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಕಾರ್ಮೀಕ ಜ್ಞಾನ ಪ್ರಕಾಶ ರಕ್ಷಣಾ ಕಾರ್ಯ ಮುಂದುವರೆಸಿದ್ದಾರೆ.

ಈಗಾಗಲೇ ಸುಮಂತ್, ರಮಾಕಾಂತ್, ನಾರಾಯಣಸ್ವಾಮಿ, ಜಾನಕಿರಾಮ ಹಾಗೂ ಮ್ಯಾನೇಜರ್ ಕುಲದೀಪಸಿಂಗ್ ಅವರನ್ನು ರಕ್ಷಣೆ ಮಾಡಲಾಗಿದೆ.

ಕಬ್ಬಿಣದ ರಾಕ್ ನಡಿ ಸಿಲುಕಿದ್ದರಿಂದ ಐವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಯಿಂದ ಸತತ ಹಲವು ಗಂಟೆಗಳ ಕಾರ್ಯಾಚರಣೆ ನಡೆದಿದ್ದು, ಇನ್ನು ಹಲವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಯಥಾವತ್ತಾಗಿ ದಿನನಿತ್ಯದಂತೆ ಕೆಲಸ ಮಾಡುವಾಗ ಮೈ ಮೇಲೆ ಕಬ್ಬಿಣದ ರಾಕ್ ಬಿತ್ತು. ಏನಾಗಿದೆ ಎಂದು ನೋಡುವಷ್ಟರಲ್ಲೇ ಭಾರಿ ಅವಘಡವೊಂದು ಸಂಭವಿಸಿದ್ದು ಗೊತ್ತಾಯಿತು. ಹೀಗಾಗಿ ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡೆವು ಎಂದು ಕಾರ್ಮಿಕರು ತಿಳಿಸಿದರು.

ಈ ಹೋಲಿ ಸೋಲ್ ಗೋದಾಮಿನಲ್ಲಿ ಹದಿನೈದರಿಂದ ಇಪ್ಪತ್ತು ಜನರು ಕೆಲಸ ಮಾಡುತ್ತಿದ್ದರು. ಕಳೆದ ಹಲವು ತಿಂಗಳ ಹಿಂದೆಯೇ ಈ ರಾಕ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗಿತ್ತು.

ಆದರೂ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದ್ದರಿಂದ ಇಂದು ಅವಘಡ ಸಂಭವಿಸಿದೆ ಎಂದು ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಅಶೋಕ ಎಂಬುವರು ತಮ್ಮ ಅಳಲು ತೋಡಿಕೊಂಡರು.

Please follow and like us:

Leave a Reply

Your email address will not be published. Required fields are marked *