ಚಿತ್ರದುರ್ಗ: ಕಂಟ್ರಾಕ್ಟರ್ ಒಬ್ಬರ ಶವ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿ ಎಸೆದು ಹೋಗಿರುವ ಶಂಕೆ ವ್ಯಕ್ತವಾದ ಘಟನೆ ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗದ ಹೊರ ವಲಯದಲ್ಲಿರುವ ಮಲ್ಲಾಪುರ ಕೆರೆಯಲ್ಲಿ ಈ ಘಟನೆ ನಡೆದಿದ್ದು, ಕಂಟ್ರಾಕ್ಟರ್ ರಾಜಣ್ಣ(56) ಶವ ಪತ್ತೆಯಾಗಿದೆ.
ನಗರದ ಮುನ್ಸಿಪಲ್ ಕಾಲೋನಿ ನಿವಾಸಿಯಾಗಿದ್ದ ಕಂಟ್ರಾಕ್ಟರ್ ರಾಜಣ್ಣ ಅವರು ಕಳೆದ 6 ರಂದು ನಾಪತ್ತೆಯಾಗಿದ್ದಾರೆ ಎಂದು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮುಖಕ್ಕೆ ಪ್ಲಾಸ್ಟಿಕ್ ಕವರ್ ಕಟ್ಟಿ ಕೆರೆಗೆ ಹಾಕಿರುವ ಸಾಧ್ಯತೆಗಳಿದ್ದು,
ಅದಕ್ಕೂ ಮುನ್ನ ಕೊಲೆ ಮಾಡಿ, ಆನಂತರ ಕೆರೆಗೆ ಎಸೆದಿರಬೇಕು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.