ಚಿತ್ರದುರ್ಗ: ಬಾಲಕನ ಕಣ್ಣಲ್ಲಿ ರಬ್ಬರ್ ರೀತಿಯ ಕಲ್ಲುಗಳು ಒಂದರ ಒಂದು ತಾನಾಗಿಯೇ ಹೊರ ಬರುತ್ತಿರುವ ಕುರಿತಂತೆ ವರದಿ ನೀಡುವಂತೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರಾದ ಶಿವಾನಂದ ಕಾಪಸಿ ಆದೇಶ ಹೊರಡಿಸಿದ್ದಾರೆ.
ಈ ಕುರಿತಂತೆ ವರದಿ ನೀಡಲು ದಾವಣಗೆರೆಯ ಜೆ ಜೆ ಎಂ ವೈದ್ಯಕೀಯ ಮಹಾವಿದ್ಯಾಲಯ ದ ಪ್ರಾಂಶುಪಾಲರಿಗೆ ಪತ್ರ ಬರೆದಿರುವ ಅವರು,
ಮೂರು ತಜ್ಞ ವೈದ್ಯರ ಸಮಿತಿ ರಚಿಸಿ, ಅಧ್ಯಯನ ನಡೆಸಿ ಮೂರು ದಿನಗಳ ಒಳಗೆ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ.
ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ತಣಿಗೆಕಲ್ಲು ಗ್ರಾಮದಲ್ಲಿ ವೈಧ್ಯ ಲೋಕಕ್ಕೆ ಸವಾಲ್ ಆಗಿ ಪರಿಣಮಿಸಿರುವ ತಣಿಗೆಕಲ್ಲು ಗ್ರಾಮದ ರೇವಣ ಸಿದ್ದಪ್ಪ ಹಾಗೂ ರೂಪಾ ದಂಪತಿಯ ೧೦ ವರ್ಷದ ಮಗ ಮಿಥುನ್ ಕಣ್ಣಲ್ಲಿ ರಬ್ಬರ್ ರೀತಿಯ ಕಲ್ಲುಗಳು ಬರುತ್ತಿರುವ ಕುರಿತು ಪ್ರಜಾಕಿರಣ. ಕಾಮ್ ಹಾಗೂ ವಿವಿಧ ಮಾಧ್ಯಮಗಳಿಂದ ವರದಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಆತನ ಪೋಷಕರು ಅಚ್ಚರಿಗೊಂಡು, ಆತಂಕಕ್ಕೆ ಸಿಲುಕಿದ್ದರು. ಈ ರೀತಿಯ ಕಲ್ಲುಗಳು ಕಣ್ಣಲ್ಲಿ ಏಕಾಎಕಿ ಬರಲು ಆರಂಭಿಸಿದ್ದ ರಿಂದ ಚಿಕಿತ್ಸೆಗಾಗಿ ಹೊಸದುರ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆತನ ತಪಾಸಣೆ ನಂತರ ಬಾಲಕನ ಕಣ್ಣಲ್ಲಿನ ಕಲ್ಲು ಕಂಡು ವೈದ್ಯರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದರಿಂದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರಾದ ಶಿವಾನಂದ ಕಾಪಸಿ ವರದಿ ಕೇಳಲಾಗಿದೆ ಎಂದು ಅವರು ಪ್ರಜಾಕಿರಣಕ್ಕೆ ತಿಳಿಸಿದ್ದಾರೆ.