ರಾಜ್ಯ

ಸಭಾಪತಿ ಸ್ಥಾನ ಕೈ ತಪ್ಪಿದ್ದಕ್ಕೆ ಜೆಡಿಎಸ್ ನಲ್ಲೂ ಅಸಮಾಧಾನದ ಹೊಗೆ ….!?

ಬೆಂಗಳೂರು : ಉತ್ತರ ಕರ್ನಾಟಕ ಭಾಗದ ಹಿರಿಯ ಲಿಂಗಾಯತ ಮುಖಂಡರು ಹಾಗೂ ಎಳು ಬಾರಿ ಶಿಕ್ಷಕರ ಮತ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿರುವ ಜೆಡಿಎಸ್ ನ ಹಿರಿಯ ಮುಖಂಡರಾಗಿದ್ದ ಬಸವರಾಜ ಹೊರಟ್ಟಿ ಅವರಿಗೆ ಹಂಗಾಮಿ ಸಭಾಪತಿ ಹುದ್ದೆಯಿಂದ ಪೂರ್ಣ ಪ್ರಮಾಣದ ಆರು ವರ್ಷಗಳ ಅವಧಿಗೆ ವಿಧಾನ ಪರಿಷತ್ ಸಭಾಪತಿ ಸ್ಥಾನ ಕೈ ತಪ್ಪಿದ್ದಕ್ಕೆ ಜೆಡಿಎಸ್ ನಲ್ಲೂ ಅಸಮಾಧಾನ ಬುಗಿಲೆದ್ದಿದೆ.

ಈ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿರುವ ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯರು, ಅವರಂತಹ ಹಿರಿಯ ನಾಯಕರಿಗೆ ಈ ಪರಿಸ್ಥಿತಿ ಆದರೆ ಪಕ್ಷದಲ್ಲಿ ತಮ್ಮ ಪರಿಸ್ಥಿತಿ ಎನೂ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಸಮ್ಮೀಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅದರಲ್ಲೂ ವಿಶೇಷವಾಗಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗಿನಿಂದಲೂ ಈ ಭಾಗವನ್ನು ಕಡೆಗಣಿಸುತ್ತಿದ್ದಾರೆ ಎಂಬ ಕೂಗು ಬಲಗೊಳ್ಳುತ್ತಿರುವ ಬೆನ್ನಹಿಂದೆಯೇ ಇಂತಹ ಮಹತ್ತರ ಬದಲಾವಣೆ ಆಗಿರುವುದು ಸರಿಯಲ್ಲ ಎಂದು ಅನೇಕರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.

ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ನ ಹಿರಿಯ ಸದಸ್ಯರಾಗಿದ್ದರು. ಇದು ಅವರಿಗಷ್ಟೇ ಅಲ್ಲ ಬೇಸರದ ಸಂಗತಿಯಲ್ಲ. ಇದು ಉತ್ತರ ಕರ್ನಾಟಕ ಭಾಗಕ್ಕೆ ಆದ ದೊಡ್ಡ ಅನ್ಯಾಯ ಎಂದು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಹೇಳಿದ್ದಾರೆ.

ಇದು ಅಸಮಾಧಾನ ಬೇಗುದಿಗೆ ಕಾರಣವಾಗಿದ್ದು, ಎಲ್ಲ ಸ್ಥಾನಮಾನ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗಕ್ಕೆ ಹೋದರೆ ನಾವೇನು ಮಾಡಬೇಕು ಎಂದು ಕೆಲವರು ಪ್ರಶ್ನಿಸಿದ್ದಾರೆ. ಅದರಲ್ಲೂ ಪ್ರಮುಖ ಹುದ್ದೆಗಳಿಗೆ ನಮಗೆ ಯಾಕೆ ಮನ್ನಣೆ ಇಲ್ಲ ಎಂದು ಕಿಡಿ ಕಾರಿದ್ದಾರೆ.

ಸಿಎಂ ಕುಮಾರಸ್ವಾಮಿ ವಿರುದ್ದವೂ ಕೆಲವರು ಸಿಟ್ಟಿಗೆದ್ದಿದ್ದಾರೆ. ಜೆಡಿಎಸ್ ನ ಕೆಲ ಶಾಸಕರು ಈ ಬಗ್ಗೆ ಪಕ್ಷದ ವೇದಿಕೆಯಲ್ಲಿಯೇ ಕಿಡಿ ಕಾರಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವೇಳೆ ಬಾಗಲಕೋಟೆ, ವಿಜಯಪುರ ಜಿಲ್ಲೆಯ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ, ಲಿಂಗಾಯತ ಮುಖಂಡರು ಆಗಿರುವ ಕಾಂಗ್ರೆಸ್ ನ ಹಿರಿಯ ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಅವರಿಗೆ ಸಭಾಪತಿ ಸ್ಥಾನ ಕೈ ತಪ್ಪಿರುವುದು ಕೂಡ ಸಮ್ಮೀಶ್ರ ಸರಕಾರದ ಇಬ್ಬಗೆ ನೀತಿಗೆ ಉಭಯ ಪಕ್ಷಗಳ ನಾಯಕರು ಯಾವ ರೀತಿ ತೇಪೆ ಹಾಕುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

Please follow and like us:

Leave a Reply

Your email address will not be published. Required fields are marked *