ರಾಜ್ಯ

ಸಾಹಿತಿ ಮೋಹನ ನಾಗಮ್ಮನವರ ಇನ್ನಿಲ್ಲ

ಧಾರವಾಡ : ಉತ್ತರ ಕರ್ನಾಟಕ ಭಾಗದ ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ಮೋಹನ ನಾಗಮ್ಮನವರ ಇಂದು ಬೆಳಗ್ಗೆ ಎಸ್ ಡಿ ಎಂ ಆಸ್ಪತ್ರೆಯ ಲ್ಲಿ ನಿಧನ ಹೊಂದಿದರು.

ಕಳೆದ ಹಲವು ವರ್ಷಗಳಿಂದ ಬಹು ಅಂಗಾಂಗ ವೈಫಲ್ಯ ದಿಂದ ನರಳುತ್ತಿದ್ದ ಅವರು ಇಂದು ಚಿಕಿತ್ಸೆ ಫಲಿಸದೆ ಇಹಲೋಕವನ್ನು ತ್ಯಜಿಸಿದರು.

ಅವರು ಲಂಕೇಶ್ ಪತ್ರಿಕೆ, ರಾಜಕೀಯ ರಂಗ ಪತ್ರಿಕೆಗಳ ಮೂಲಕ ಈ ಭಾಗದ ಅನೇಕ ಸಮಸ್ಯೆ ಗಳಿಗೆ ಧ್ವನಿಯಾಗಿದ್ದರು.

ಆನಂತರ ಅವರು ಜನತಾ ಪರಿವಾರದ ಅನೇಕ ನಾಯಕರ ಒಡನಾಟ ಹೊಂದಿದ್ದರು. ಬಳಿಕ ಕನ್ನಡ ನಾಡು, ಬಿ ಎಸ್ಪಿ , ಸೇರಿ ನಾಡಿನ ಉದ್ದಗಲಕ್ಕೂ ಸಂಚರಿಸಿದ್ದರು. ಅಲ್ಲದೆ ಧಾರವಾಡ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.

ಅವರು ಹುಬ್ಬಳ್ಳಿ ಧಾರವಾಡ ಅವಳಿ ನಗರದ ವಿವಿಧ ಪಕ್ಷಗಳ ಅನೇಕ ನಾಯಕರಿಗೆ ಮಾರ್ಗದರ್ಶನ ಮಾಡಿದ್ದರು. ಅವರ ಅಗಲಿಕೆ ಅನೇಕ ಶಿಷ್ಯ ವರ್ಗಕ್ಕೆ ತುಂಬ ಲಾರದ ನಷ್ಟವಾಗಿದೆ.

ಅವರ ಪ್ರಖರ ಲೇಖನಗಳು, ಸಾಹಿತ್ಯ, ಸಮಾಜ ಸೇವೆ ಪರಿಗಣಿಸಿ ಅವರಿಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಅವರು ಹದಿಮೂರು ಕ್ಕೂ ಹೆಚ್ಚು ಕೃತಿಗಳನ್ನು ತನ್ನ ಸಾಹಿತ್ಯ ಲೋಕಕ್ಕೆ ನೀಡಿದ್ದರು. ಬಂಡಾಯ ಸಾಹಿತ್ಯ ದ ಮೂಲಕ ಜನರ ಮನ ಗೆದ್ದಿದ್ದರು.

ಅನಾರೋಗ್ಯ ಇದ್ದರೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉತ್ಸುಕರಾಗಿದ್ದರು. ಅವರ ನಿಧನ ಧಾರವಾಡ ಜಿಲ್ಲೆಯ ಸಾಹಿತ್ಯ, ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಮೋಹನ ನಾಗಮ್ಮನವರ ನಿಧನಕ್ಕೆ ಧಾರವಾಡ ಜಿಲ್ಲೆಯ ಗಣ್ಯರು, ಕರ್ನಾಟಕ ವಿದ್ಯಾವರ್ಧಕ ಸಂಘದ ಸದಸ್ಯರು, ಸಾಹಿತಿಗಳು, ಚಿಂತಕರು, ಪತ್ರಕರ್ತ ರ ಸಂಘದ ಸದಸ್ಯರು ಕಂಬನಿ ಮಿಡಿದಿದೆ.

Please follow and like us:

Leave a Reply

Your email address will not be published. Required fields are marked *