ಅಪರಾಧ

ಕುಡಿದು ರಂಪಾಟ ಮಾಡಿದ ಕಿನ್ಯಾ ಯುವತಿ

ಬೆಂಗಳೂರು : ಕುಡಿದ ಮತ್ತಿನಲ್ಲಿ ಮಧ್ಯರಾತ್ರಿ ಸ್ಥಳೀಯರೊಂದಿಗೆ ರಂಪಾಟ ಮಾಡಿದ ಕಿನ್ಯಾ ಯುವತಿ ಮೇಲೆ ಪ್ರಕರಣ ದಾಖಲಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಗುರುವಾರ ರಾತ್ರಿ ಪಬ್ ವೊಂದರ ಮುಂದೆ ಕುಡಿದು ನಿಂತಿದ್ದ ಯುವತಿ ಸ್ಥಳೀಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಳು. ಘಟನಾ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಳು. ಅದಾದ ಬಳಿಕ ಠಾಣೆಗೆ ಕರೆದುಕೊಂಡು ಬಂದರೆ ಠಾಣೆಯಲ್ಲಿಯೇ ಪೊಲೀಸರ ಮೇಲೆ ಹಲ್ಲೆ ಮಾಡಿದಲ್ಲದೆ, ಕಿರುಚಾಟ ನಡೆಸಿದ್ದಳು.

ಈ ಹಿನ್ನಲೆಯಲ್ಲಿ ಆಕೆಯ ಮೇಲೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ ಆರ್ ಐ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಆದರೆ ಆಕೆ ಪೊಲೀಸರ ಮೇಲೆಯೇ ಆರೋಪ ಮಾಡಿದ್ದು, ಮನೆಗೆ ಮರಳುವಾಗ ಪೊಲೀಸರು ಅಡ್ಡಿ ಗಟ್ಟಿ ಗುಂಡಾವರ್ತನೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಕುಡಿದು ರಂಪಾಟ ಮಾಡಿದ ಪ್ರಕರಣ ದಾಖಲು ಮಾಡಿದ್ದಾರೆ.

ನನ್ನ ಮೇಲೆಯೂ ಹಲ್ಲೆ ಆಗಿದೆ ಎಂದು ಹಲ್ಲೆಗೊಳಗಾದ ಯುವತಿ ಇದೀಗ ಬೋರಿಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆದರೆ ಪೊಲೀಸರು ಮಾತ್ರ ಪಬ್ ಮುಂದೆ ದಾಂದಲೆ ಮಾಡಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾಳೆ. ಅಲ್ಲದೆ, ಠಾಣೆಯ ಒಳಗಡೆಯೇ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಆಪಾದಿಸಿದ್ದಾರೆ.

ಒಟ್ಟಾರೆ ಪ್ರಕರಣ ಹಲವು ತಿರುವು ಪಡೆದು ಗೊಂದಲದ ಗೂಡಾಗಿದೆ. ಇದು ಇನ್ನೂ ಯಾವ ರೀತಿ ಟ್ವಿಸ್ಟ್ ಪಡೆಯುತ್ತದೆ ಎಂಬುದು ಕಾದು ನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *