ಬೆಳಗಾವಿ : ಕೇಂದ್ರ ಹಾಗೂ ರಾಜ್ಯದ ಸರಕಾರದ ವಿರುದ್ದ ರೊಚ್ಚಿಗೆದ್ದಿರುವ ರೈತರು ಸೋಮವಾರ ಮತ್ತೇ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ಆರಂಭಿಸಿದ್ದಾರೆ.
ದೀಢ್ ನಮಸ್ಕಾರ್, ಅಹೋರಾತ್ರಿ ಚಳುವಳಿ ನಡೆಸಿ, ಸರಕಾರಕ್ಕೆ ಬಿಸಿ ತಾಕಿಸಿದ್ದ ರೈತರು ಹಾಗೂ ವಿವಿಧ ಸಂಘಟನೆಗಳ ಪ್ರತಿಭಟನಾಕಾರರು ಪಿಪೀ ಊದುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.
ಇನ್ನೂ ಕೆಲವು ರೈತರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಬಾರಕೋಲು ಹಿಡಿದು ಪ್ರತಿಭಟನೆ ನಡೆಸಿ ಕಬ್ಬು ಬೆಳೆಗೆ ಬೆಲೆ ನಿಗದಿ, ಸಕ್ಕರೆ ಕಾರ್ಖಾನೆಗಳ ಬಾಕಿ ಮರುಪಾವತಿಸುವಂತೆ ಆಗ್ರಹಿಸಿದರು.
ಇವರೆಡು ಸರಕಾರ ಇದ್ದು ಇಲ್ಲದಂತಾಗಿವೆ. ಪ್ರತಿಭಟನೆಗೂ ಜಗ್ಗದ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿ, ಪೀಪೀ ಊದಿ ಕಣ್ಣು ತೆರೆಸುವ ಪ್ರಯತ್ನ ಮಾಡಿದರು.