ನವದೆಹಲಿ : 2016ನೇ ಸೆಪ್ಟಂಬರ್ ನಿಂದ ಆರ್ ಬಿ ಐ ಗರ್ವನರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಉರ್ಜೀತ್ ಪಟೇಲ್ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ದೇಶದ ಹಣಕಾಸು ವ್ಯವಸ್ಥೆ ನಿರ್ವಹಿಸುತ್ತಿದ್ದ ಅತ್ಯುನ್ನುತ ಸಂಸ್ಥೆಯಾದ ರಿಸರ್ವ ಬ್ಯಾಂಕ್ ಆಫ್ ಇಂಡಿಯಾದ 24ನೇ ಗರ್ವನರ್ ಆಗಿದ್ದ ಊರ್ಜಿತ್ ಪಟೇಲ್ ಅವರು ಕೇಂದ್ರ ಸರಕಾರದ ಕೆಲವೊಂದು ಬೇಡಿಕೆಗಳಿಗೆ ನಿರಾಕರಿಸುತ್ತಾ ಬಂದ ಹಿನ್ನಲೆಯಲ್ಲಿ ಇಬ್ಬರ ನಡುವೆ ತಿಕ್ಕಾಟ ನಡೆದಿತ್ತು.
ಕೇಂದ್ರ ಸರಕಾರ ಬಂಡವಾಳಶಾಹಿಗಳ ಸಾಲ ಮರುಪಾವತಿ ವಿಷಯಕ್ಕೆ ಸಂಬಂಧಿಸಿದಂತೆ ಅವಧಿ ವಿಸ್ತರಿಸುವಂತೆ ಹಾಗೂ ಕೆಲವೊಂದು ಷರತ್ತು ಸಡಿಲಿಸುವಂತೆ ಬೇಡಿಕೆ ಇಟ್ಟಿತ್ತು. ಆದರೆ ಇದನ್ನು ತಳ್ಳಿ ಹಾಕಿದ್ದ ಆರ್ ಬಿ ಐ ಗರ್ವನರ್ ಊರ್ಜಿತ್ ಪಟೇಲ್ ವಿರುದ್ದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮುನಿಸಿಕೊಂಡಿತ್ತು.
ಇದರಿಂದ ಇಬ್ಬರ ನಡುವೆ ವೈ ಮನಸ್ಸು ಉಂಟಾಗಿತ್ತು. ಆರ್ ಬಿ ಐ ಗರ್ವನರ್ ಉರ್ಜೀತ್ ಪಟೇಲ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಆದರೆ ಅದರಲ್ಲಿ ವೈಯಕ್ತಿಕ ಕಾರಣ ನೀಡಿದ್ದಾರೆ. ಹೀಗಾಗಿ ಇದು ಇನ್ನಷ್ಟು ಕುತೂಹಲ ಮೂಡಿಸಿದ್ದು, ಇಬ್ಬರ ನಡುವೆ ಮತ್ತೇ ಜಟಾ ಪಟಿ ಎರ್ಪಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.