ಧಾರವಾಡ : ಕೆಲಗೇರಿ ಕೆರೆಯ ಸ್ವಚ್ಛತಾ ಅಭಿಯಾನದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಭಾಗಿಯಾಗಿ ಸ್ಥಳೀಯರ ಗಮನ ಸೆಳೆದರು.
ಅವರಿಗೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಸಾಥ್ ನೀಡಿದ್ದು ವಿಶೇಷವಾಗಿತ್ತು.
ಅದರ ನಿರ್ವಹಣೆಗೆ ಪಾಲಿಕೆ, ಕೆಲಗೇರಿ ನಿವಾಸಿಗಳು ಮತ್ತು ಸಾರ್ವಜನಿಕರ ಸಹಕಾರ ಪಡೆದು ಸಮಗ್ರ ನಿರ್ವಹಣೆಗೆ ಸೂಕ್ತಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಈ ಕುರಿತು ಸಭೆ ಜರುಗಿಸಿ, ಕೆರೆ ಸ್ವಚ್ಛತೆ, ದುರಸ್ತಿ ಹಾಗೂ ಅಗತ್ಯವಿರುವ ಹೊಸ ಕಾಮಗಾರಿಗಳಿಗೆ ಸೂಕ್ತ ಕ್ರಿಯಾಯೋಜನೆ ಸಲ್ಲಿಸುವಂತೆ ಪಾಲಿಕೆ, ಲೋಕೋಪಯೋಗಿ ಹಾಗೂ ಕೃ.ವಿ.ವಿ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಪ್ರತಿಯೋಬ್ಬರ ಸಹಕಾರ ಮತ್ತು ಪಾಲ್ಗೊಳುವಿಕೆಯಿಂದ ಮಾತ್ರ ಕೆರೆ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದರು.
ಕೆಲಗೇರಿ ಕೆರೆ ಸ್ವಚ್ಚತಾ ಅಭಿಯಾನದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ.ಬಿ.ಸಿ.ಸತೀಶ, ಪಾಲಿಕೆ ಆಯುಕ್ತ ಶಕೀಲ ಅಹ್ಮದ, ಡಾ.ಸದಾಶಿವ ಮರ್ಜಿ, ಮಹ್ಮದ ಜುಬೇರ, ಪ್ರಕಾಶ ಕುದರಿ, ವಿರೂಪಾಕ್ಷ ಯಮಕನಮರಡಿ, ಡಾ.ವಿಶಾಲ ಅಡಹಳ್ಳಿಕರ, ಬಸವರಾಜ ವರವಟ್ಟಿ, ಬಿ.ಆರ್.ಹಿರೇಮಠ, ನಿಸಾರ ಅಹ್ಮದ, ಪಾಲಿಕೆ ಸಹಾಯಕ ಆಯುಕ್ತ ಎಂ.ಬಿ.ಸಬರದ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ, ಬಸಲಿಂಗಯ್ಯ ಹಿರೇಮಠ, ಡಾ.ಬಸವರಾಜ ಡೋಣುರ, ಪ್ರಕಾಶ ಉಡಕೇರಿ, ವಿಶ್ವೇಶ್ವರಿ ಹಿರೇಮಠ, ಡಾ. ರಾಮು ಮೂಲಗಿ, ದೇವಾನಂದ ರತ್ನಾಕರ, ಡಾ.ವಿಶ್ವನಾಥ ಚಿಂತಾಮಣಿ ಪಾಲ್ಗೊಂಡಿದ್ದರು.
ಡಾ.ಡಿ.ಬಿ.ಕರಡೊಣಿ ನೇತೃತ್ವದಲ್ಲಿ ಕೆ.ಸಿ.ಡಿ ವಿದ್ಯಾರ್ಥಿಗಳು, ಪ್ರಾಚಾರ್ಯ ಎ.ಜಿ.ಶಿಂಗೆ ನೇತೃತ್ವದಲ್ಲಿ ಆರ್.ಎಲ್.ಎಸ್ ಕಾಲೇಜು ವಿದ್ಯಾರ್ಥಿಗಳು, ಪ್ರಾ.ಹಡಪದ ನೇತೃತ್ವದಲ್ಲಿ ಮದಿನಾ ಪಿ.ಯು ಕಾಲೇಜು, ಎಸ್.ಎಸ್.ದೊಡಮನಿ ನೇತೃತ್ವದಲ್ಲಿ ಶಿವಾಜಿ ಪಿ.ಯು.ಕಾಲೇಜು, ಕೆ.ಎಚ್.ಮಡಿವಾಳರ ನೇತೃತ್ವದಲ್ಲಿ ಕೆ.ಪಿ.ಎಸ್.ಸಿ. ಪಿಯು ಕಾಲೇಜು, ಪ್ರಾ. ಕೊಟಬಾಗಿ ನೇತೃತ್ವದಲ್ಲಿ ಆರ್.ಎನ್.ಶೆಟ್ಟಿ ಪಿ.ಯು.ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.