ಅಪರಾಧ

ಜಗದೀಶ ಶೆಟ್ಟರ್ ಜೇಬಿಗೆ ಕೈ ಹಾಕಿದ್ದ ಖದೀಮ ಅಂದರ್ ……!

ಬೆಳಗಾವಿ : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಜೇಬಿಗೆ ಕೈ ಹಾಕಿದ ಖದೀಮನೊಬ್ಬ ಪೊಲೀಸರ ಕೈ ಗೆ ತಗಲು ಹಾಕಿಕೊಂಡ ಘಟನೆ ರಾಜ್ಯದ ಎರಡನೇ ರಾಜಧಾನಿ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೊದಲ ದಿನ ರಾಜ್ಯದ ಸಮ್ಮೀಶ್ರ ಸರಕಾರಕ್ಕೆ ಬಿಸಿ ತಾಕಿಸಲು ಆಯೋಜಿಸಿದ್ದ ರೈತರ ಬೃಹತ್ ಸಮಾವೇಶದ ವೇಳೆ ಈ ಯಡವಟ್ಟು ಬೆಳಕಿಗೆ ಬಂದಿದೆ.

ಮೂವರ ಜೇಬಿಗೆ ಕತ್ತರಿ ಹಾಕಿ 20 ಸಾವಿರ ಹಣ ಕಳುವು ಮಾಡಿದ್ದ ಕಳ್ಳ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮೊಬೈಲ್ ಕಳವು ಮಾಡಲು ಹೋದಾಗ ಜನರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಳಗಾವಿಯ ಶಹಾಪುರ ಠಾಣೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕಳ್ಳನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

Please follow and like us:

Leave a Reply

Your email address will not be published. Required fields are marked *