ಅಂತಾರಾಷ್ಟ್ರೀಯ

ಶಿವಕುಮಾರ ಶ್ರೀಗಳ ಚಿಕಿತ್ಸೆ ಬಗ್ಗೆ ಪುಸ್ತಕ ಬರೆಯಲು ವೈದ್ಯರ ಚಿಂತನೆ

ಚೆನ್ನೈ : ನಡೆದಾಡುವ ದೇವರು ಎಂದೆ ನಾಡಿನ ಮನೆ ಮಾತಾಗಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು 111ನೇ ಇಳಿ ವಯಸ್ಸಿನಲ್ಲೂ ವೈದ್ಯರ ಶಸ್ತ್ರ ಚಿಕಿತ್ಸೆಗೆ ಸ್ಪಂದಿಸಿದ ರೀತಿ ಅಮೋಘವಾಗಿದೆ.

ಅವರ ಲವಲವಿಕೆ, ಚೇತರಿಕೆ, ಸದಾ ನಗು ಮುಖದ ಆರೋಗ್ಯ ಹೊಂದಿರುವ ಶ್ರೀಗಳ ಕುರಿತು ಚೆನ್ನೈನ ರೇಲಾ ಆಸ್ಪತ್ರೆ ವೈದ್ಯ ಡಾ. ಮೊಹಮ್ಮದ್ ರೇಲಾ ಅವರು ಪುಸ್ತಕ ಬರೆಯಲು ಚಿಂತನೆ ನಡೆಸಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳಿಗೆ ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಅದಕ್ಕೆ ಶ್ರೀಗಳು ಸ್ಪಂದಿಸಿದ ರೀತಿ ಕಂಡು ಸ್ವತಃ ವೈದ್ಯರೇ ಅಚ್ಚರಿಗೊಂಡಿದ್ದಾರೆ.

ಇಂತಹ ವಯಸ್ಸುನಲ್ಲಿ ಕೂಡ ಶ್ರೀಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡ ಬಗೆಯೇ ವೈದ್ಯ ಲೋಕಕ್ಕೆ ವಿಸ್ಮಯದ ಸಂಗತಿ. ಹೀಗಾಗಿ ಅವರ ಒಡನಾಟ, ಚಿಕಿತ್ಸೆ ನೀಡಿದ ರೀತಿ, ಶ್ರೀಗಳ ಸ್ಪಂದನೆ ಎಲ್ಲವನ್ನೂ ಪುಸ್ತಕ ರೂಪದಲ್ಲಿ ಹೊರತರಲು ಡಾ. ಮೊಹಮ್ಮದ್ ರೇಲಾ ನಿರ್ಧರಿಸಿದ್ದಾರೆ.

ಡಾ. ಮೊಹಮ್ಮದ್ ರೇಲಾ ಅವರು ವಿಶ್ವ ಪ್ರಸಿದ್ಧ ವೈದ್ಯರಲ್ಲಿ ಒಬ್ಬರಾಗಿದ್ದು, ಕೇವಲ 5 ವರ್ಷದ ಮಗುವಿಗೆ ಲೀವರ್ ಕಸಿ ಮಾಡಿ ಗಿನ್ನಿಸ್ ದಾಖಲೆಯಲ್ಲಿ ಸಾಧನೆ ಮೆರೆದಿದ್ದಾರೆ.

ಅಂತಹ ವೈದ್ಯರು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ರಕ್ತನಾಳ ಹಾಗೂ ಕಿಡ್ನಿ ಸೊಂಕಿನಲ್ಲಿ ಬಳಲುತ್ತಿದ್ದ ಚಿಕಿತ್ಸೆ ನೀಡಿರುವುದು ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡು ಬಂದಿರುವುದು ಭಕ್ತ ವರ್ಗದಲ್ಲಿ ಇನ್ನಷ್ಟು ಸಂತಸ ಮನೆ ಮಾಡಿದೆ.

Please follow and like us:

Leave a Reply

Your email address will not be published. Required fields are marked *