Uncategorized

ನಮಗೆ ಇತಿಹಾಸದ ಪಾಠ ಕಲಿಸುವ ಅಗತ್ಯವಿಲ್ಲ ಎಂದು ಗುಡುಗಿದ ಖರ್ಗೆ

ನವದೆಹಲಿ : ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ನಮಗೆ ಇತಿಹಾಸದ ಪಾಠ ಕಲಿಸುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗುಡುಗಿದರು.

ಅವರು ಶುಕ್ರವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮೇಲೆ ಮಾತನಾಡಿ, 4 ವರ್ಷ ನಾಲ್ಕು ತಿಂಗಳಲ್ಲಿ ಮೋದಿ ಸರಕಾರ ಏನೆಲ್ಲಾ ಮಾಡಿದೆ ಎಂಬುದನ್ನು ಏಳೆಏಳೆಯಾಗಿ ಬಿಡಿಸಿಟ್ಟರು. ಕಳೆದ ಹಲವು ವರ್ಷಗಳ ಸರಕಾರಕ್ಕೆ ಹೋಲಿಸಿದರೆ ಸಾಧನೆ ಕಳಪೆಯಾಗಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರು ನಮಗೆ ದೇಶದ ಇತಿಹಾಸ ತಿಳಿಸಿದರು. ಅನುಭವ ಮಂಟಪದ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇಲ್ಲ.ಅಲ್ಲದೆ, ಅದನ್ನು ಅವರು ನಮಗೆ ತಿಳಿಸಲು ಹೊರಟಿರುವುದು ಸೋಜಿಗದ ಸಂಗತಿ. ಅಲ್ಲಮಪ್ರಭು ಅವರು ಅನುಭವ ಮಂಟಪದ ಅಧ್ಯಕ್ಷರು. ಅವರನ್ನು ಎಲ್ಲರನ್ನು ಸಮಾನತೆಯಿಂದ ಕರೆದುಕೊಂಡು ಹೋಗುತ್ತಿದ್ದರು. ನಾವು 70 ವರ್ಷಗಳ ಕಾಲ ದೇಶವನ್ನು ಸಮಾನತೆ ಆಧಾರದ ಮೇಲೆತೆಗೆದುಕೊಂಡು ಹೋಗಿದ್ದೇವೆ ಎಂದು ತಿರುಗೇಟು ನೀಡಿದರು.

ನಿಮ್ಮ ಜ್ಞಾನ ಪ್ರದರ್ಶನ ಮಾಡುವ ಅವಶ್ಯಕತೆಯಿರಲಿಲ್ಲ. ರಾಮಾಯಣ, ಮಹಾಭಾರತ ಹೇಳುವ ನೀವು ಅದರಲ್ಲಿ ಬರುವ ಶಂಭು, ಏಕವಲ್ಯನ ಬಗ್ಗೆ ಏಕೆ ಮಾತನಾಡಲ್ಲ ಎಂದು ಪ್ರಶ್ನಿಸಿದ ಖರ್ಗೆ, ರಾಮ್ ನಾಮ್ ಹೇಳುತ್ತಲೇ ಬೆನ್ನಲ್ಲಿ ಚೂರಿ ಹಾಕುವ ಸಂಪ್ರದಾಯ ಹೊಂದಿರುವ ಆರ್, ಎಸ್ ಎಸ್ ಹಾಗೂ ಬಿಜೆಪಿ ಸದನದ ಒಳಗೆ ಕೆಲ ಸತ್ಯದಿಂದ ದೂರವಾದ ಅಂಶಗಳು ಹೇಳುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಅರವತ್ತು ವರ್ಷಗಳ ಕಾಲ ನಾವು ವಿದ್ಯುತ್ ಕೊಟ್ಟಿಲ್ಲವೇ, ಹಾಗಿದ್ದರೆ ನಾವು 7ಇಷ್ಟು ವರ್ಷ ಇಲ್ಲದ ಅಭಿವೃದ್ದಿ ಈಗ ಎಲ್ಲಿಂದ ಬಂತು ಎಂದು ತರಾಟೆಗೆ ತೆಗೆದುಕೊಂಡರು. ನಾವು ಪ್ರಜಾಪ್ರಭುತ್ವದ ಜಮೀನುದಾರ ಅಲ್ಲ. ವಾರಸುದಾರರು. ಅದನ್ನು ಉಳಿಸಿಕೊಂಡು ಬಂದ ಹಿನ್ನಲೆಯಲ್ಲಿ ಈಗ ನೀವು ಅಧಿಕಾರಕ್ಕೆ ಬಂದಿದ್ದೀರಿ ಎಂದು ಛೇಡಿಸಿದರು. ನಿಮ್ಮ ಹಾಗೆ ನಡೆದಿದ್ದರೆ ಪ್ರಜಾಪ್ರಭುತ್ವ ಎಂದೋ ಮುಗಿದು ಹೋಗುತ್ತಿತ್ತು ಎಂದು ಕುಟುಕಿದರು. ಸಮಾನತೆಯ ಬಲಿ ಕೊಡುವ ನೀವು ನಿಮ್ಮ ಹಾಗೆ ನಡೆಯಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

Please follow and like us:

Leave a Reply

Your email address will not be published. Required fields are marked *